ತಿದ್ದುಪಡಿ ಮಾಡಲು ಆಯ್ಕೆ ವಿಧ - 1
Step-1
ಹೆಚ್.ಆರ್.ಎಂ.ಎಸ್. ನಲ್ಲಿ “Dummy” ( ವಿಮಾ ಇಲಾಖೆಯಿಂದ ನೀಡದಿರುವ ) ಅಥವಾ ಇತರೆ ವಿಮಾದಾರರಿಗೆ ನೀಡಿರುವ ಪಾಲಿಸಿ ಸಂಖ್ಯೆಯನ್ನು ಬಳಸುತ್ತಿದ್ದರೆ, ವಿಮಾ ಇಲಾಖೆಯಿಂದ ನೀಡಲಾಗಿರುವ ಪ್ರಥಮ ಪಾಲಿಸಿ ಸಂಖ್ಯೆಯ ವಿಮಾ ಪತ್ರದ ನಕಲು ಪ್ರತಿಯನ್ನು ಸಂಬಂಧಪಟ್ಟ ಜಿಲ್ಲಾ ವಿಮಾ ಕಛೇರಿಗೆ ಸಲ್ಲಿಸಿ HRMS Master Table ನಲ್ಲಿ update ಮಾಡಿಸಿಕೊಳ್ಳತಕ್ಕದ್ದು.
Step-2
ತಮ್ಮ ವೇತನ ಬಟವಾಡೆ ಅಧಿಕಾರಿಗಳಿಗೆ ಸಂಬಂಧಪಟ್ಟ ದಾಖಲೆಗಳೊಂದಿಗೆ (HRMS Master Table ನಲ್ಲಿ ನಮೂದಿಸಿರುವ ಪ್ರತಿ, HRMS Master Table ನಲ್ಲಿ ನಮೂದಿಸಿರುವ ಪಾಲಿಸಿ ಬಾಂಡ್ ನ ನಕಲು ಪ್ರತಿ) ಮನವಿಯನ್ನು ಸಲ್ಲಿಸುವುದು.
Step-3
ವೇತನ ಬಟವಾಡೆ ಅಧಿಕಾರಿಗಳು Step -2 ರಂತೆ ಸ್ವೀಕರಿಸಿದ ಮನವಿಯನ್ನು ಪರಿಶೀಲಿಸಿ
ಹೆಚ್.ಆರ್.ಎಂ.ಎಸ್. ತಂತ್ರಾಂಶದ “Insurance Details” ನಲ್ಲಿ ಕಡ್ಡಾಯವಾಗಿ HRMS Master Table ನಲ್ಲಿ ನಮೂದಿಸಿರುವ ಪಾಲಿಸಿ ಸಂಖ್ಯೆಯನ್ನು ಸೇರಿಸುವುದು.
Step-4
ವೇತನ ಬಟವಾಡೆ ಅಧಿಕಾರಿಗಳು ಆಯಾ ಇಲಾಖೆಯಲ್ಲಿರುವ ಹೆಚ್.ಆರ್.ಎಂ.ಎಸ್. ನೋಡಲ್ ಅಧಿಕಾರಿಗಳ ಮುಖಾಂತರ ತಿದ್ದುಪಡಿ ಮಾಡಿಸಿಕೊಳ್ಳಲು ಕ್ರಮವಹಿಸುವುದು
Step-5
ಪಾಲಿಸಿ ಸಂಖ್ಯೆಯನ್ನು ಹೆಚ್.ಆರ್.ಎಂ.ಎಸ್. ನಲ್ಲಿ ತಿದ್ದುಪಡಿ ಮಾಡಿಸಿಕೊಂಡ ನಂತರ ವಿಮಾದಾರರು ಸಂಬಂಧಪಟ್ಟ ಜಿಲ್ಲಾ ವಿಮಾ ಕಛೇರಿಗೆ ತಿದ್ದುಪಡಿಯಾದ ವೇತನ ಚೀಟಿಯೊಂದಿಗೆ ( Pay slip with Updated KGID NO) ತಮ್ಮ ಪಾಲಿಸಿಗಳ ಖಾತೆಗಳನ್ನು ಕ್ರಮಬದ್ದಗೊಳಿಸಲು ನಿರ್ದಿಷ್ಟಪಡಿಸಿರುವ ನಮೂನೆಯೊಂದಿಗೆ ಮನವಿಯನ್ನು ಸಲ್ಲಿಸತಕ್ಕದ್ದು.
ತಿದ್ದುಪಡಿ ಮಾಡಲು ಆಯ್ಕೆ ವಿಧ - 2
Step-1
ಹೆಚ್.ಆರ್.ಎಂ.ಎಸ್. ನಲ್ಲಿ “Dummy” ( ವಿಮಾ ಇಲಾಖೆಯಿಂದ ನೀಡದಿರುವ ) ಅಥವಾ ಇತರೆ ವಿಮಾದಾರರಿಗೆ ನೀಡಿರುವ ಪಾಲಿಸಿ ಸಂಖ್ಯೆಯನ್ನು ಬಳಸುತ್ತಿದ್ದರೆ, ವೇತನ ಬಟವಾಡೆ ಅಧಿಕಾರಿಗಳಿಂದ ವಿಮಾ ಇಲಾಖೆ ನೀಡಲಾಗಿರುವ ಪ್ರಥಮ ಪಾಲಿಸಿ ಸಂಖ್ಯೆಯ ವಿಮಾ ಪತ್ರದ ನಕಲು ಪ್ರತಿಯನ್ನು ಸಲ್ಲಿಸಿ ಹೆಚ್.ಆರ್.ಎಂ.ಎಸ್. ತಂತ್ರಾಂಶದ “Insurance Details” ನಲ್ಲಿ ಕಡ್ಡಾಯವಾಗಿ ಪಾಲಿಸಿ ಸಂಖ್ಯೆಯನ್ನು ಸೇರಿಸುವುದು.
Step-2
Step-1 ರಂತೆ “Insurance Details” ನಲ್ಲಿ ನಮೂದಿಸಿರುವ ಪ್ರಿಂಟ್ ಪಡೆದ ಪ್ರತಿ, ವಿಮಾ ಪತ್ರದ ನಕಲು ಪ್ರತಿ, ವೇತನ ಚೀಟಿ( pay slip) ಹಾಗೂ ವೇತನ ಬಟವಾಡೆ ಅಧಿಕಾರಿಯಿಂದ ಧೃಡೀಕೃತ ತಿದ್ದುಪಡಿ ಕೋರಿಕೆ ಅರ್ಜಿಯನ್ನು ಸಂಬಂಧಪಟ್ಟ ಜಿಲ್ಲಾ ವಿಮಾ ಕಛೇರಿಗೆ ಸಲ್ಲಿಸಿ ಕಡ್ಡಾಯವಾಗಿ ಸ್ವೀಕೃತಿ ಪಡೆದುಕೊಳ್ಳತಕ್ಕದ್ದು.
Step-3
ಮೇಲಿನಂತೆ ಜಿಲ್ಲಾ ವಿಮಾ ಕಛೇರಿ ಸ್ವೀಕರಿಸಿದ ಮನವಿಯನ್ನು ಪರಿಶೀಲಿಸಿ HRMS Master Table ನಲ್ಲಿ update ಮಾಡಿದ ನಂತರ , ಹೆಚ್.ಆರ್.ಎಂ.ಎಸ್. ನಲ್ಲಿ ತಿದ್ದುಪಡಿ ಮಾಡಲು ಕೇಂದ್ರ ಕಛೇರಿಗೆ ಸಲ್ಲಿಸುವುದು ಹಾಗೂ ತಿದ್ದುಪಡಿಯಾದ ಮಾಹಿತಿಯನ್ನು ಪಡೆದು ಮನವಿದಾರರಿಗೆ ತಿಳಿಸುವುದು
Step-4
ಪಾಲಿಸಿ ಸಂಖ್ಯೆಯನ್ನು ಹೆಚ್.ಆರ್.ಎಂ.ಎಸ್. ನಲ್ಲಿ ತಿದ್ದುಪಡಿ ಮಾಡಿಸಿಕೊಂಡ ನಂತರ ವಿಮಾದಾರರು ಸಂಬಂಧಪಟ್ಟ ಜಿಲ್ಲಾ ವಿಮಾ ಕಛೇರಿಗೆ ತಿದ್ದುಪಡಿಯಾದ ವೇತನ ಚೀಟಿಯೊಂದಿಗೆ ( Pay slip with Updated KGID NO) ತಮ್ಮ ಪಾಲಿಸಿಗಳ ಖಾತೆಗಳನ್ನು ಕ್ರಮಬದ್ದಗೊಳಿಸಲು ನಿರ್ದಿಷ್ಟಪಡಿಸಿರುವ ನಮೂನೆಯೊಂದಿಗೆ ಮನವಿಯನ್ನು ಸಲ್ಲಿಸತಕ್ಕದ್ದು.
“ವಿಮಾ ಸೌಲಭ್ಯಗಳು ಸಂಪೂರ್ಣವಾಗಿ ಆನ್ಲೈನ್ ಆಗಿದ್ದು, ಈ ರೀತಿ ತಪ್ಪಾದ ಮಾಹಿತಿಯಿಂದಾಗಿ ಆನ್ಲೈನ್ ಮೂಲಕ ಯಾವುದೇ ವಿಮಾ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.”